ಆಹಾರ ಕುಹರ (ದಾನಿ)  
ಏಕಕೋಶಗಳಲ್ಲಿ ನೀರು, ಆಹಾರ ಮತ್ತು ಅಂತಃಸ್ರಾವಗಳಿಂದ ರೂಪುಗೊಂಡ ಕುಹರಗಳು. ಸೂಕ್ಷ್ಮಜೀವಿಯಾದ ಅಮೀಬ ನೀರಿನಲ್ಲಿ ಚಲಿಸುವಾಗ, ಆಹಾರ ಕಣಗಳನ್ನು ಮಿಥ್ಯಾಪಾದಗಳಿಂದ ಆವರಿಸಿ, ಆಹಾರ ಕುಹರ ರೂಪುಗೊಳ್ಳುತ್ತದೆ. ಅಂತಃದ್ರವ್ಯದಲ್ಲಿ ಆಹಾರ ಕುಹರ ಚಲಿಸುತ್ತಾ, ಕುಹರದಲ್ಲಿ ಆಹಾರ ಪಚನವಾಗುತ್ತಿದೆ. ಪಚನವಾದ ಆಹಾರ ಎಲ್ಲಾ ಭಾಗಗಳಿಗೆ ವಿಸರಣೆಯಾಗುತ್ತದೆ. ಪಚನವಾಗದ ಆಹಾರ ಕೋಶದ ಒಂದು ಭಾಗಕ್ಕೆ ಸಾಗಿ ಅಲ್ಲಿಂದ ಆಹಾರ ಹೊರಬೀಳುತ್ತದೆ. ಆಹಾರ ಕುಹರದಲ್ಲಿ ಆಹಾರ ಪಚನವಾಗುವಾಗ ಆಹಾರದಲ್ಲಾಗುವ ಬದಲಾವಣೆಗಳನ್ನು ನಿದರ್ಶಿಸಬಹುದಾಗಿದೆ. ಜೀವಿಗಳಿಗೆ ಕೆಲವು ವರ್ಣವಸ್ತುಗಳನ್ನು ಇಲ್ಲವೆ ವರ್ಣಯುಕ್ತ ಆಹಾರವನ್ನು ಒದಗಿಸಿ, ಅವುಗಳಲ್ಲಾಗುವ ವರ್ಣ ಬದಲಾವಣೆಯಿಂದ ಆಮ್ಲಯುಕ್ತ ಇಲ್ಲವೆ ಕ್ಷಾರಯುಕ್ತ ಸ್ಥಿತಿಗಳನ್ನು ತಿಳಿಯಬಹುದು. ಬಹುತರವಾಗಿ ಪಚನಕ್ರಿಯೆ ಕ್ಷಾರಯುಕ್ತ ಸ್ಥಿತಿಯಲ್ಲೇ ನಡೆಯುವುದು. 					
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ